Trust

ಕನ್ನಿಕ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ (ರಿ.)
ಗ್ರಾಮೀಣ ವಲಯದ ವಿದ್ಯಾರ್ಥಿಗಳಿಗಾಗಿ ನವೋದಯ ಶಾಲೆಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ 30 ವರ್ಷಗಳಿಂದ ತರಬೇತಿ ನೀಡುತ್ತಿದೆ. ಈವರೆವಿಗೂ ಮಕ್ಕಳು ಈ ತರಬೇತಿ ಸಂಸ್ಥೆಯಿಂದ ತರಬೇತು ಪಡೆದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.
ಪ್ರತಿ ಜಿಲ್ಲೆಗೂ ಒಂದು ನವೋದಯ ಶಾಲೆ ಇದ್ದು, 80 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಶೇಕಡ 50 ರಷ್ಟು ವಿದ್ಯಾರ್ಥಿಗಳು ಈ ಸಂಸ್ಥೆಯಿಂದಲೇ ಆಯ್ಕೆಯಾಗುತ್ತಾರೆ. ಈ ಸಂಸ್ಥೆ ನೊಬೆಲ್ ವರ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಅಲ್ಲದೆ, ಸಮಾಜಮುಖಿ ಕೆಲಸಗಳತ್ತ ತೊಡಗಿಸಿಕೊಂಡು ಸಾರ್ಥಕ್ಯ ಕಂಡಿರುವ ಟ್ರಸ್ಟ್ ಸರಕಾರಿ ಶಾಲೆಗಳ ಸಬಲೀಕರಣ ಮಾಡುತ್ತಾ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಾ ನಮ್ಮ ಸಂಸ್ಕೃತಿಯನ್ನು ಪೋಷಿಸುತ್ತಿದೆ. ಮಧುರ ಮಂಡ್ಯದ ನೆಲದ ಸೊಗಡನ್ನು, ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಿದೆ.
ಸಾಹಿತ್ಯ ಸೇವೆ:
ಅನೇಕ ಕವಿಗೋಷ್ಠಿಗಳನ್ನು ಆಯೋಜನೆ ಮಾಡುತ್ತಾ ಬಂದಿರುತ್ತದೆ. ದಸರಾ ಕವಿಗೋಷ್ಠಿ, ದೀಪಾವಳಿ ಕವಿಗೋಷ್ಠಿ, ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ, ಸಂಕ್ರಾಂತಿ ಕವಿಗೋಷ್ಠಿ ಹೀಗೆ ಹಲವಾರು ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಮೂಡಿಸುವುದರ ಸಲುವಾಗಿ ಸ್ವರಚಿತ ಕಥೆಗಳನ್ನು ಬರೆಸಿ ಚಿಣ್ಣರ ಚಿಲಿಪಿಲಿ ಪುಸ್ತಕವನ್ನು ಪ್ರಕಟಿಸಿದೆ. ಯುವ ಸಾಹಿತಿಗಳ ಅನೇಕ ಪುಸ್ತಕಗಳನ್ನು ಟ್ರಸ್ಟ್ ಪ್ರಕಟಿಸಿದೆ. ಅದರಲ್ಲಿ ಅಂಗವಿಕಲ ಆ. ರಾ. ಬಾಲಕೃಷ್ಣರವರ ಕಾಡು ಮಲ್ಲಿಗೆ ಕವನ ಸಂಕಲನ ಒಂದಾಗಿದೆ.
ಪ್ರತಿವರ್ಷ “ಕನ್ನಿಕ ಶಿಲ್ಪ ಸಾಹಿತ್ಯ ಪ್ರಶಸ್ತಿ” ಹಾಗೂ “ಕನ್ನಿಕ ಶಿಲ್ಪ ಪುಸ್ತಕ ಪ್ರಶಸ್ತಿ” ಹೀಗೆ ಯುವ ಸಾಹಿತಿಗಳನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಟ್ರಸ್ಟ್ ಕರ್ತವ್ಯ ನಿರ್ವಹಿಸುತ್ತಿದೆ.
ಶೈಕ್ಷಣಿಕ ಚಟುವಟಿಕೆ:
- ನವೋದಯ, ಮೊರಾರ್ಜಿ ಅಳಿಕೆ ವಸತಿ ಶಾಲೆಗಳಿಗೆ ವಸತಿ ತರಬೇತಿ ನೀಡುತ್ತಿದೆ.
- ಅನೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯ ಹಸ್ತ ನೀಡುತ್ತಾ ಬಂದಿದೆ.
- ಆರ್ಥಿಕವಾಗಿ ದುರ್ಬಲವಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಧನ ಸಹಾಯ ನೀಡುತ್ತಿದೆ.
- ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ.

ಸರ್ಕಾರಿ ಶಾಲೆಗಳ ಉನ್ನತೀಕರಣ:
ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚಿಸುವುದು, ಗೋಡೆಯ ಮೇಲೆ ಚಿತ್ರ ಬಿಡಿಸುವುದು, ಪೀಠೋಪಕರಣಗಳು, ನಿಘಂಟುಗಳು, ಕಂಪ್ಯೂಟರ್ ನೀಡುವುದು, ನಾಮಫಲಕ ಬರೆಸುವುದು, ಧ್ವನಿವರ್ಧಕಗಳು, ವಾಟರ್ ಫಿಲ್ಟರ್ ಗಳನ್ನು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ತಪಾಸಣೆ ಶಿಬಿರಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುತ್ತ ಬಂದಿರುತ್ತದೆ.
ಸಾಮಾಜಿಕ ಚಿಂತನೆ-ಕಳಕಳಿ:
ಸಮಾಜದಲ್ಲಿ ಉತ್ತಮ ಕೆಲಸ ಮಾಡಿದ ಮಹಿಳೆಯರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ನೀಡುತ್ತಿದೆ. ಶಿಕ್ಷಕರ ದಿನಾಚರಣೆಯಂದು ಉತ್ತಮ ಶಿಕ್ಷಕರನ್ನು ಗುರುತಿಸಿ ಶಿಕ್ಷಣ ಪ್ರಶಸ್ತಿ ನೀಡುತ್ತಿದೆ. ಅಭಿಯಂತರ ದಿನಾಚರಣೆಯಂದು ಉತ್ತಮ ಅಭಿಯಂತರನ್ನು ಗುರುತಿಸಿ ಅಭಿಯಂತರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪರಿಸರ ಸಮತೋಲನವನ್ನು ಕಾಪಾಡಲು ಗಿಡಗಳನ್ನು ನೆಡುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ವೃದ್ಧಾಶ್ರಮಗಳಿಗೆ ಭೇಟಿ ನೀಡಿ ವಯೋವೃದ್ಧರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗಿದೆ.
